ಹೆಚ್ಚಿದ ಟ್ರಾಫಿಕ್ ನಿಂದಾಗಿ ಸಂಪದದ ಒಂದೂವರೆ ವರ್ಷ ಹಳೆಯ ಸರ್ವರ್ ಕೈಕೊಟ್ಟಿತು.
ಈಗ ಹೊಸ ಸರ್ವರಿಗೆ ಸಂಪದವನ್ನು ಸ್ಥಳಾಂತರಿಸಿದ್ದೇವೆ.
ಮುಖ್ಯವಾಗಿ ಇನ್ನೊಮ್ಮೆ ಈ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಕೆಲವು ಕ್ರಮಗಳನ್ನು
ತೆಗೆದುಕೊಳ್ಳುತ್ತಿದ್ದೇವೆ, ಸಂಪದದ ತಂತ್ರಾಂಶವನ್ನು ಹೊಸ ಆವೃತ್ತಿಗೆ
ಬದಲಾಯಿಸುತ್ತಿದ್ದೇವೆ. ಹೀಗಾಗಿ ಈ ಕಾರ್ಯ ಮತ್ತಷ್ಟು ಸಮಯ ತೆಗೆದುಕೊಂಡಿದೆ.
ಈ ಸಮಯದಲ್ಲಿ ನಿಮ್ಮೆಲ್ಲರ ತಾಳ್ಮೆ, ಬೆಂಬಲ ಹಾಗು ಜೊತೆ ಎಂದಿನಂತೆ ಬಹಳ ಮುಖ್ಯ.